ದೇಶಾದ್ಯಂತ ಭುಗಿಲೇಳುತ್ತಿರುವ ಪ್ರತಿಭಟನೆಗಳನ್ನು ತಡೆಯಲು ಭಾರತ ಸರ್ಕಾರ ಹಲವು ಕಸರತ್ತು ನಡೆಸ್ತಿದೆ. ಹಲವು ಸಮಾಧಾನಕರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದ್ರೇ, ಅದೇ ಬಿಜೆಪಿ ಸರ್ಕಾರದ ಕೆಲ ನಾಯಕರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪ್ರತಿಭಟನೆಗಳಿಗೆ ತುಪ್ಪು ಸುರಿಯುತ್ತಿದ್ದಾರೆ. ಕೇಂದ್ರ ಸಚಿವ ಕಿಶನ್ ರೆಡ್ಡಿ ಅಗ್ನಿವೀರರು ಮುಂದೆ ಕ್ಷೌರಿಕರು, ಚಾಲಕರು, ಎಲೆಕ್ಟ್ರಿಷಿಯನ್ ಆಗ್ತಾರೆ ಅಂದ್ರೆ, ಬಿಜೆಪಿ ಪ್ರಧಾನಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಬಿಜೆಪಿ ಕಚೇರಿಗೆ ಸೆಕ್ಯೂರಿಟಿ ಗಾರ್ಡ್ ಮಾಡಿಕೊಳ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇವರೆಲ್ಲರ ಮಾತುಗಳಿಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಡವರ ಮಕ್ಕಳು ಸೆಕ್ಯೂರಿಟಿ ಆಗಬೇಕಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಶ್ನಿಸಿದ್ದಾರೆ. ಚೌಕಿದಾರ್ ಅಂದ್ರೆ ಇದೇ ಇರ್ಬೇಕು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಇದಕ್ಕೆ ಪೂರಕ ಎಂಬಂತೆ ಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಕೂಡ ಮಾತನಾಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಎಷ್ಟು ಬುಲ್ಡೋಜರ್ ಹರಿಸ್ತೀರಿ ಎಂದು ಪ್ರಶ್ನಿಸಿದ್ದಾರೆ.
#publictv #newscafe #hrranganath #agnipathprotest